ಬ್ಯಾಂಕ್‍ನವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ

ಬೆಂಗಳೂರು: ದಾಸರಹಳ್ಳಿಯ ಪ್ರಶಾಂತ್ ನಗರ ನಿವಾಸಿ ರಾಜಣ್ಣ ತನ್ನ ಉದ್ಯಮ ಅಭಿವೃದ್ದಿಗಾಗಿ ಖಾಸಗಿ ಬ್ಯಾಂಕ್‍ನಿಂದ ಸಾಲ ಮಾಡಿ ಬಂಡವಾಳ ಹೂಡಿಕೆ ಮಾಡಿದ್ದ ಕೋವಿಡ್ ಮಹಾಮಾರಿ ಎಲ್ಲಾ ಉದ್ಯಮಗಳ ಮೇಲೆ ಕರಿ ನೆರಳು ಚೆಲ್ಲಿದ್ದ ಹಿನ್ನೆಲೆ ಸಾಲ ಮರುಪಾವತಿ ಮಾಡೋದು ತಡವಾಯ್ತು, ಸಾಲ ಮರುಪಾವತಿಗೆ ಬ್ಯಾಂಕ್‍ನವರು ನೀಡಿದ ಕಿರುಕುಳಕ್ಕೆ ಬೇಸತ್ತು ಉದ್ಯಮದ ಕನಸು ಕಂಡಿದ್ದ ವ್ಯಕ್ತಿ ಸಾವಿನ ಮನೆ ಕದ ತಟ್ಟಿದ್ದಾನೆ. ಹತ್ತಾರು ವರ್ಷಗಳಿಂದ ಊರ ಮಡಿ ತೊಳೆಯೋ ಮಡಿವಾಳಿಕೆ ವೃತ್ತಿ ಮಾಡುತ್ತಿದ್ದ 57 ವರ್ಷದ ರಾಜಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೋಬಿ ಘಾಟ್‍ಗಳಲ್ಲಿ ಬಟ್ಟೆ ಒಗೆಯುತ್ತಿದ್ದ ರಾಜಣ್ಣ ಉದ್ಯಮ ಅಭಿವೃದ್ದಿ ಮಾಡಿಕೊಳ್ಳಲು ಖಾಸಗಿ ಬ್ಯಾಂಕ್‍ನಲ್ಲಿ ತನ್ನ ಹೆಂಡತಿ ನೀಲಮ್ಮ ಹೆಸರಿನಲ್ಲಿ 2018ರ ಜೂನ್‍ತಿಂಗಳಲ್ಲಿ 35 ಲಕ್ಷ ಸಾಲ ಪಡೆದಿರುತ್ತಾರೆ. ಸಾಲ ಪಡೆಯಲು ಹೆಂಡತಿ ಹೆಸರಿನಲ್ಲಿದ್ದ ಮನೆಯನ್ನು ಒತ್ತೆ ಇಟ್ಟು ಸಾಲ ಮಾಡಿ ಬಟ್ಟೆ ಹೊಗೆಯುವ ಒಂದು ದೊಡ್ಡ ಮೆಷನ್‍ಗೆ ಬಂಡವಾಳ ಹಾಕಿ ಉದ್ಯೋಗ ನಡೆಸುತ್ತಿದ್ದ ಇವರು ಸಾಲ ನೀಡಿದ ಬ್ಯಾಂಕ್‍ನವರ ಕಿರುಕುಳಕ್ಕೆ ಬೇಸತ್ತು ದೋಬಿಘಾಟ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

NEWS DESK

TIMES OF BENGALURU