ರಾಜ್ಯದಲ್ಲಿಂದು 4,553 ಜನರಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೊನಾ ಆರ್ಭಟ ಮುಂದುವರಿದಿದೆ. 4,553 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 10,15,155 ಕ್ಕೆ ಏರಿಕೆ ಆಗಿದೆ. 15 ಸೋಂಕಿತರು ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆಯು 12,625 ಕ್ಕೆ ಏರಿದೆ.

ಇಂದು 2,060 ಮಂದಿ ಗುಣಮುಖರಾಗಿದ್ದಾರೆ. ಮತ್ತೆ ಸಕ್ರಿಯ ಪ್ರಕರಣಗಳು 39,092 ಕ್ಕೆ ಏರಿದ್ದು, 331 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳು ಶೇ. 3.79 ರಷ್ಟು ಇದ್ದರೆ ಮೃತಪಟ್ಟವರ ಪ್ರಮಾಣ ಶೇ. 0.32 ರಷ್ಟಿದೆ.

 

NEWS DESK

TIMES OF BENGALURU