ಜಿಮ್‍ಗಳಿಗೆ ಶೇ.50 ರಷ್ಟು ಅವಕಾಶ

ಬೆಂಗಳೂರು : ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಜಿಮ್‍ಗಳನ್ನು ಮುಚ್ಚಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಆದೇಶವನ್ನು ಹಿಂಪಡೆಯುವಂತೆ ಜಿಮ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಸಲ್ಲಸಿತ್ತು. ಇದೀಗ ಮನವಿಗೆ ಸರ್ಕಾರ ಸ್ಪಂದಿಸಿ 50% ಅವಕಾಶ ನೀಡಿದೆ. ರಾಜ್ಯದ ಜಿಮ್‍ಗಳಿಗೆ ಶೇ 50 ರಷ್ಟು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಆದರೆ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿದರೆ ಜಿಮ್‍ಗೆ ಬೀಗ ಹಾಕುವುದಾಗಿ ಎಚ್ಚರಿಗೆ ನೀಡಿದೆ. ಜಿಮ್‍ನಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮವನ್ನು ಪಾಲಿಸಬೇಕು. ಇನ್ನು ಜಿಮ್ ಮಾಲೀಕರು ವ್ಯಾಯಾಮ ಉಪಕರಣಗಳನ್ನು ಸ್ಯಾನಿಟೈಜರ್ ಮಾಡಬೇಕು. ಈ ಎಲ್ಲಾ ನಿಯಮಗಳನ್ನು ಪಾಲಿಸದೆ ನಿಯಮ ಉಲ್ಲಂಘನೆ ಮಾಡಿದರೆ ಜಿಮ್‍ಗೆ ಬೀಗ ಹಾಕಲಾಗುವುದು ಎಂದು ಆದೇಶ ಪತ್ರ ಹೊರಡಿಸಿದೆ.

 

NEWS DESK

TIMES OF BENGALURU