ಬೆಂಗಳೂರು: ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಹೆನ್ನೂರು ಪೊಲೀಸರು ಹಿಡಿದು ಬಂಧಿಸಿದ್ದಾರೆ. ಜಾಹನ್ಸ್ ವಿಹುಂಗೆಫ್ರಿ ಕೆನಿಗೇ ಬಂಧಿತ ಆರೋಪಿ. ಆರೋಪಿಯಿಂದ 103 ಲೀಟರ್ ಆಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಹೊರಮಾವಿನಲ್ಲಿ ಅಫ್ರಿಕನ್ ಕಿಚನ್ ಹೆಸರಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ಹೆನ್ನೂರು ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಕುಮಾರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲು ಹೋದಾಗ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಿಲು ಯತ್ನಿಸಿದ. ನಂತರ ಕಾರು ಚಲಾಯಿಸಿ ಪೊಲೀಸರ ಮೇಲೆ ಹತ್ತಿಸಲು ಮುಂದಾಗಿದ್ದ. ಹೊಯ್ಸಳ ಮೂಲಕ ಚೇಸ್ ಮಾಡಿ ಅಡ್ಡಗಟ್ಟಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
NEWS DESK
TIMES OF BENGALURU