ಮತ್ತೆ ಕೋರ್ಟ್‍ಗೆ ಹಾಜರಾದ ಯುವತಿ

ಬೆಂಗಳೂರು: ಆರ್. ಟಿ ನಗರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಹಾಜರಾಗಿದ್ದು, 2ನೇ ಬಾರಿಗೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನ ದಾಖಲಿಸುತ್ತಿದ್ದಾಳೆ.

ಗುರುನಾನಕ್ ಕೋರ್ಟ್‍ನಲ್ಲಿ ಸಿಡಿ ಲೇಡಿ ತನ್ನ ಹೇಳಿಕೆಯನ್ನ ದಾಖಲಿಸ್ತಿದ್ದು, ಸಿಆರ್‍ಪಿಸಿ ಸೆಕ್ಷನ್ 164ರ ಅಡಿಯಲ್ಲಿ ತನ್ನ ಹೇಳಿಕೆಯನ್ನ ದಾಖಲಿಸ್ತಿದ್ದಾರೆ. ಬಿಗಿ ಭದ್ರತೆಯ ನಡುವೆ ಯುವತಿಯನ್ನ ಕೋರ್ಟ್ ಹಾಜರು ಪಡಿಸಲಾಯ್ತು. ಅದ್ರಂತೆ, ಕಳೆದ 20 ನಿಮಿಷಗಳಿಂದ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸ್ತಿದ್ದಾರೆ. ಅಂದ್ಹಾಗೆ, ಈ ತನ್ನ ಮಗಳನ್ನ ಕಿಡ್ನಾಪ್ ಮಾಡಲಾಗಿದೆ ಎಂದು ಸಿಡಿ ಲೇಡಿಯ ತಂದೆ-ತಾಯಿ ದೂರು ದಾಖಲಿಸಿದ್ರು. ಇದಕ್ಕೆ ಸಂಬಂಧಿಸಿದಂತೆ ಸಧ್ಯ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡ್ತಿದ್ದಾರೆ.

NEWS DESK

TIMES OF BENGALURU