ಮಾರ್ಷಲ್ಸ್ ಜೊತೆ 2 ಸಾವಿರ ಹೋಂ ಗಾರ್ಡ್ಸ್ ನಿಯೋಜನೆ

ಬೆಂಗಳೂರು: ಕೋವಿಡ್ 2ನೇ ಅಲೆ ವಿಪರೀತವಾಗಿ ಹರಡುತ್ತಿರುವ ಹಿನ್ನೆಲೆ ಮಾರ್ಷಲ್ಸ್ ಪೊಲೀಸರ ಜೊತೆಗೆ 2 ಸಾವಿರ ಹೋಂ ಗಾರ್ಡ್ಸ್ ನ್ನು    ನಿಯೋಜಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಬಗ್ಗೆ ಹೋಂ ಗಾರ್ಡ್ಸ್ ಐಜಿಪಿಯವರಿಗೆ ಪತ್ರವನ್ನೂ ಬರೆಯಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು. ಈ ಬಗ್ಗೆ ಮಾತನಾಡಿದ ಅವರು, ಮತ್ತೆ ಕೋವಿಡ್ ಉಲ್ಬಣವಾಗುತ್ತಿದೆ.

ಎಲ್ಲರೂ ಕೋವಿಡ್ ನಿಯಮ ಪಾಲನೆ ಮಾಡಬೇಕಾಗುತ್ತದೆ. ಮಾರ್ಷಲ್ ಪೊಲೀಸರಲ್ಲದೆ, 2 ಸಾವಿರ ಹೋಂ  ಗಾರ್ಡ್ಸ್ ನ್ನು ನಿಯೋಜಿಸಲು ಸಹ ನಿರ್ಧರಿಸಲಾಗಿದೆ. ಪ್ರತಿ ಸ್ಟೇಷನ್ ವ್ಯಾಪ್ತಿಯಲ್ಲಿ 20 ಜನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು. ಹಾಗೂ ಲಸಿಕಾ ಕೇಂದ್ರಗಳೂ ಹೆಚ್ಚಳವಾಗಬೇಕಿದೆ. ನಗರದಲ್ಲಿ ಕೋವಿಡ್ ಹೆಚ್ಚಳದಿಂದ ಬೆಡ್‌ಗಳ ಮೀಸಲು ಅಗತ್ಯವಿದೆ ಎಂದು ತಿಳಿಸಿದರು.

 

NEWS DESK

TIMES OF BENGALURU