ಬೆಂಗಳೂರು: ಶ್ರೀಗಂಧದ ಮರವನ್ನು ಕಡಿದು ಕಾರಿನಲ್ಲಿ ಸಾಗಿಸಲು ಪ್ರಯತ್ನಿಸುತ್ತಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸಂಪತ್ ಅಲಿಯಾಸ್ ಮಣಿ(27) ವರ್ಷ ಬಂಧಿತ ಆರೋಪಿ. ಆರೋಪಿಯಿಂದ 3.40 ಲಕ್ಷ ರೂ. ಬೆಲೆ ಬಾಳುವ ಶ್ರೀಗಂಧ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆನ್ನೂರು ಠಾಣೆ ವ್ಯಾಪ್ತಿಯ ಹೊರಮಾವು ಅಗರದ ಶನಿಮಹಾತ್ಮ ದೇವಸ್ಥಾನದ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ನಾಲ್ವರು ಕಡಿದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ತಕ್ಷಣ ಇಸ್ಪೆಕ್ಟರ್ ವಸಂತ್ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದಾಗ ಸಂಪತ್ ಸಿಕ್ಕಿಬಿದ್ದು, ಇನ್ನು ಮೂವರು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಈತನಿಂದ 114 ಕೆಜಿ ತೂಕದ 12 ಶ್ರೀಗಂಧದ ಮರದ ತುಂಡುಗಳು, ಕಾರು ಮತ್ತು ಕತ್ತರಿಸಲು ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಮೂವರ ಆರೋಪಿಗಳ ಪತ್ತೆಗೆ ತಂಡ ಕಾರ್ಯಾಚರಣೆ ಮುಂದುವರೆಸಿದದೆ.
NEWS DESK
TIMES OF BENGALURU