ತಂಗಿಯನ್ನೇ ಕೊಂದ ಪಾಪಿ ಅಣ್ಣ

ಬೆಂಗಳೂರು: ಅಣ್ಣನೇ ತಂಗಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಸುಳ್ಳು ಕತೆ ಕಟ್ಟಿದ ಘಟನೆ ಬೆಳಕಿಗೆ ಬಂದಿದೆ. ತಂಗಿ ಪ್ರೀತಿಸುತ್ತಿದ್ದ ವಿಷಯ ಗೊತ್ತಾದ ನಂತರ ಸಿಟ್ಟಾಗಿದ್ದ ಅಣ್ಣ, ತಂಗಿಯನ್ನು ಕೊಲೆ ಮಾಡಿ ರೈಲ್ವೆ ಹಳಿ ಸಮೀಪ ಮೃತದೇಹ ಎಸೆದು ಬಂದಿದ್ದಾನೆ. ಸಿಸಿಟಿವಿಯಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹೆಣ್ಣೂರಿನ ಟಿ.ಎನ್.ಟಿ. ಲೇಔಟ್ ನಿವಾಸಿಯಾಗಿರುವ 19 ವರ್ಷದ ಯುವತಿಯನ್ನು ಆಕೆಯ ಸಹೋದರ ಕಿರಣ್(25) ಕೊಲೆ ಮಾಡಿದ ಆರೋಪದ ಕೇಳಿ ಬಂದಿದ್ದು ಆತನನ್ನು ಬಂಧಿಸಲಾಗಿದೆ.

ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಯುವತಿ ಬಾಡಿಗೆ ಮನೆಯಲ್ಲಿ ತಾಯಿ ಹಾಗೂ ಸಹೋದರನೊಂದಿಗೆ ವಾಸವಾಗಿದ್ದಳು. ಕಿರಣ್ ಆಟೋ ಚಾಲಕನಾಗಿದ್ದು ತಂಗಿ ಯುವಕನೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು ಭಾನುವಾರ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಮೃತದೇಹವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿ ಬೈಯಪ್ಪನಹಳ್ಳಿ ರೈಲ್ವೇ ಹಳಿ ಸಮೀಪ ಎಸೆದು ಬಂದಿದ್ದಾನೆ.

NEWS DESK

TIMES OF BENGALURU