ಕೋವಿಡ್ ಭಯ; ಊರಿನತ್ತ ಹೊರಟ ಜನ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಭಯವೂ ಹೆಚ್ಚಾಗಿದೆ. ಇದರ ಪರಿಣಾಮ ಉದ್ಯೋಗ ಅರಸಿ ಬೆಂಗಳೂರಿನಲ್ಲಿ ನೆಲೆಸಿರುವ ಜನ ತಮ್ಮ ಮೂಲ ಊರುಗಳತ್ತ ಮರಳುತ್ತಿದ್ದಾರೆ. ಬೆಂಗಳೂರು ಹೊರವಲಯದ ಕೆ.ಆರ್ ಪುರ ಮತ್ತು ಐಟಿ-ಬಿಟಿ ಕ್ಷೇತ್ರ ಮಹದೇವಪುರ ಪ್ರದೇಶದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ದಿನಕ್ಕೆ ಹತ್ತಾರು ಮನೆಗಳು ಖಾಲಿಯಾಗುತ್ತಿವೆ. ಮಹದೇವಪುರ ಮತ್ತು ಕೆ.ಆರ್ ಪುರದಿಂದ ಕೋಲಾರ, ಆಂಧ್ರಪ್ರದೇಶ, ತಮಿಳುನಾಡು ಕಡೆ ವಾಹನದಲ್ಲಿ ಮನೆ ವಸ್ತುಗಳನ್ನು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ ಆದ ಕಾರಣ ಜನ ನಗರದಿಂದ ತಮ್ಮ ಸ್ವಂತ ಊರಿನ ಕಡೆ ತೆರಳುತ್ತಿದ್ದಾರೆ.

 

NEWS DESK

TIMES OF BENGALURU