ವ್ಯಾಕ್ಸಿನ್ ಮಾರ್ಕೆಟಿಂಗ್ ಮಾಡೋದ್ರಲ್ಲಿ ಮುಳುಗಿದ್ದಾರೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿರುವ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಆರೋಗ್ಯ ಸಚಿವ ಕೆ. ಸುಧಾಕರ್ ಅವರಿಗೆ ಟಾಂಗ್ ನೀಡಿದೆ. ಕಳೆದ ವರ್ಷ ಕರೋನಾ ಬಂದಾಗ ಸ್ವಿಮ್ಮಿಂಗ್ ಫೂಲ್‍ನಲ್ಲಿ ಮೋಜು ಮಾಡುತ್ತಿದ್ದರು. ಈ ಭಾರಿ ಕರೋನಾ ಉಲ್ಬಣಿಸಿದಾಗ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರನ್ನು ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾಗಿದ್ದರ ಪರಿಣಾಮವಿದು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕೋವಿಡ್ ಟೆಸ್ಟ್‍ಗಳನ್ನು ಕಡಿಮೆ ಮಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಕುಳಿತಿದ್ದರ ಪರಿಣಾಮವಿದು. ಸಂಪೂರ್ಣ ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್‍ಗಳ ಮಾರ್ಕೆಟಿಂಗ್ ಮಾಡುವುದರಲ್ಲಿ ಮುಳುಗಿದ್ದರ ಪರಿಣಾಮವಿದು ಎಂದು ಲೇವಡಿ ಮಾಡಿದೆ. ಸೋಂಕಿತ ಸರ್ಕಾರ ಕರೋನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸಿದ್ದರಿಂದ ಇಂದು ಸೋಂಕು ದಾಖಲೆ ಮಟ್ಟಕ್ಕೇರಿದೆ ಎಂದು ಟ್ವೀಟ್ ಮಾಡಿದೆ.

NEWS DESK

TIMES OF BENGALURU