ಕೊರೊನಾ ಬಗ್ಗೆ ಜನರಲ್ಲಿ ಉದಾಸೀನ ಹೆಚ್ಚಾಗಿದೆ

ಬೆಂಗಳೂರು: ಜನರು ಅನಗತ್ಯ ಗುಂಪುಗೂಡುವುದನ್ನು ಬಿಡಬೇಕು. ಜನರಲ್ಲಿ ಉದಾಸೀನ ಹೆಚ್ಚಾಗಿದೆ. ನಾವು ಪದೇ ಪದೆ ಎಚ್ಚರಿಕೆ ಕೊಡುತ್ತಿದ್ದೇವೆ, ಜನರು ನಡವಳಿಕೆ ಸುಧಾರಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನ ಅಪಾಯವಿದೆ. ಲಾಕ್‍ಡೌನ್ ಅಥವಾ ಕಫ್ರ್ಯೂ ಬೇಡ ಎಂದರೆ ಜನರೇ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಷ್ಟೇ 33 ಸಾವಿರ ಹಾಸಿಗೆ ಸಿದ್ಧ ಮಾಡಿದ್ದೇವೆ. ಇದರಲ್ಲಿ 10,083 ಆಕ್ಸಿನೇಟೇಡ್ ಬೆಡ್ ಮಾಡಲಾಗಿದೆ. ಕೋವಿಡ್ ಗಾಗಿ ಹಾಸಿಗೆಗಳನ್ನು ಮೀಸಲಿಡಲಾಗುತ್ತದೆ ಎಂದರು. ನಿನ್ನೆವರೆಗೆ ಒಟ್ಟು 48.5ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆ ನೀಡುವಲ್ಲಿ ರಾಜ್ಯಕ್ಕೆ ಆರನೇ ಸ್ಥಾನವಿದೆ. ಕೇಂದ್ರ ಆರೋಗ್ಯ ಸಚಿವರು 15 ಲಕ್ಷ ಲಸಿಕೆ ಕಳುಹಿಸಿದ್ದಾರೆ ಎಂದರು.

NEWS DESK

TIMES OF BENGALURU