ಡಿಜಿಟಲ್ ಲೋಕಕ್ಕೆ ಕ್ರೇಜಿಸ್ಟಾರ್ ಎಂಟ್ರಿ

ಬೆಂಗಳೂರು: ಪ್ರೇಮಲೋಕದ ದೊರೆ ರವಿಚಂದ್ರನ್ ಇದೀಗ ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕ್ರೇಜಿ ಸ್ಟಾರ್ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ರವಿಚಂದ್ರನ್ ಅವರು ಇದುವರೆಗೂ ಟ್ವಿಟರ್, ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ಗಳಿಂದ ದೂರ ಇದ್ದರು. ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದ ರವಿಮಾಮ ಕೊಂಚ ಬಿಡುವು ತೆಗೆದುಕೊಂಡು ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಇದೀಗ ಯುಗಾದಿ ಹಬ್ಬದ ದಿನದಂದು ಅಧಿಕೃತವಾಗಿ ಟ್ವಿಟರ್, ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್ ತೆರೆಯುವ ಮೂಲಕ ಡಿಜಿಟಲ್ ಲೋಕಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ರವಿಚಂದ್ರನ್ ಅವರು ಸೋಷಿಯಲ್ ಮೀಡಿಯಾಗಳಿಗೆ ಲಗ್ಗೆ ಇಡುತ್ತಿರುವ ಕುರಿತು ಪುಟ್ಟದೊಂದು ಟೀಸರ್ ರೂಪದ ವಿಡಿಯೋ ರಿಲೀಸ್ ಆಗಿದೆ. ಫಿಲ್ಮ್? ಸ್ಟೈಲ್?ನಲ್ಲಿ ಸೂಚನೆ ನೀಡಿದ್ದಾರೆ. ನೆಟ್‍ವಲ್ರ್ಡ್‍ಗೆ ಕಮಿಂಗ್ ಸೂನ್ ಅಂತ 10 ಸೆಕೆಂಡ್ ಟೀಸರ್ ರಿವೀಲ್ ಮಾಡಿದ್ದಾರೆ. ಇನ್ಮುಂದೆ ಡೈರೆಕ್ಟ್ ಆಗಿ ಕ್ರೇಜಿಸ್ಟಾರ್ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ಸಿನಿಮಾದ ಬಗ್ಗೆ ಅಪ್‍ಡೇಟ್ ಕೊಡ್ತಾರೆ

NEWS DESK

TIMES OF BENGALURU