ಬೆಂಗಳೂರು: ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಶೇ.8ರಷ್ಟು ವೇತನ ಹೆಚ್ಚಳ ಮಾಡಲು ಕೂಡ ಸರ್ಕಾರ ಸಿದ್ಧವಿದೆ. ಆದರೆ 6ನೇ ವೇತನ ಆಯೋಗ ಜಾರಿಮಾಡಲು ಸಾಧ್ಯವಿಲ್ಲ ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಎಚ್ಚರಿಕೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಶೇ.8ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದೇವೆ. ಲಾಕ್ ಡೌನ್ ವೇಳೆ ಸಾರಿಗೆ ಇಲಾಖೆಯಲ್ಲಿ ಹಣವೇ ಇರಲಿಲ್ಲ ಸರ್ಕಾರದ ಖಜಾನೆಯಿಂದ ಹಣ ತಂದು ನೌಕರರ ಸಂಬಳ ಪಾವತಿ ಮಾಡಿದ್ದೇವೆ. ಈಗಲೂ ಇಲಾಖೆಗೆ ಪ್ರತಿದಿನ 4 ಕೋಟಿ ನಷ್ಟವುಂಟಾಗುತ್ತಿದೆ. ಆದರೂ ಸಂಬಳ ಪಾವತಿ ಮಾಡುವುದನ್ನು ನಿಲ್ಲಿಸಿಲ್ಲ. ಸಾರಿಗೆ ನೌಕರರ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೆ ಒಂದು ಬೇಡಿಕೆಯಾದ 6ನೇ ವೇತನ ಆಯೋಗ ಜಾರಿ ಮಾತ್ರ ಸಾಧ್ಯವಿಲ್ಲ ಎಂದರು.
NEWS DESK
TIMES OF BENGALURU