ಹೂವು, ತರಕಾರಿಗಳ ದರದಲ್ಲಿ ಗಣನೀಯ ಇಳಿಕೆ

ಬೆಂಗಳೂರು: ಹೂವು, ತರಕಾರಿಗಳ ದರ ಎಂದೂ ಇಲ್ಲದಷ್ಟು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಖುಷಿ ಆಗಿದ್ದರೆ, ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದೆ. ಮಾರುಕಟ್ಟೆಯಲ್ಲಿ ಗುಲಾಬಿ, ಸೇವಂತಿಗೆ ಹೂವನ್ನು ಖರೀದಿಸುವವರೇ ಇಲ್ಲದಂತಾಗಿದೆ. ಗುಲಾಬಿ ಹೂವು ಕೆ.ಜಿ.ಗೆ 10 ರೂ. ನಂತೆ ಮಾರುತ್ತಿದ್ದಾರೆ. ಸೇವಂತಿಗೆ ಹೂವು ಕೂಡ ಕೆ.ಜಿ.ಗೆ 40 ರೂ. ದರವಿದೆ.

ಇನ್ನು ಬಹುಬೇಡಿಕೆಯ ಮಲ್ಲಿಗೆ ಹೂವು ಕೂಡ 80-100 ರೂ. ಮಿತಿಯಲ್ಲಿದೆ. ಕೆ.ಆರ್. ಮಾರುಕಟ್ಟೆಗೆ ನಿತ್ಯ ನೂರಾರು ಮಿನಿ ಟ್ರಕ್‍ಗಳಲ್ಲಿ ಹೂವು ಬರುತ್ತದೆ. ಇಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ದರದಲ್ಲಿ ಏರುಪೇರಾಗುತ್ತಿರುತ್ತದೆ. ಏಕೆಂದರೆ ಮಧ್ಯರಾತ್ರಿಯಿಂದ ಹೂವು ಆಗಮಿಸಲು ಆರಂಭವಾದರೆ, ಸುಮಾರು 8-9 ಗಂಟೆಯವರೆಗೆ ಯಥೇಚ್ಛವಾಗಿ ಮಾರುಕಟ್ಟೆಗೆ ಬರುತ್ತದೆ. ಬಂದ ಹೂವನ್ನು ಆಗಿಂದಾಗ್ಗೆ ಮಾರದಿದ್ದರೆ ಕೆಲವೊಮ್ಮೆ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.

NEWS DESK

TIMES OF BENGALURU