ಮೈಸೂರು ರಸ್ತೆ-ಕೆಂಗೇರಿ ನಡುವೆ ಪರೀಕ್ಷಾರ್ಥ ಸಂಚಾರ

ಬೆಂಗಳೂರು: ಬಿಎಂಆರ್‍ಸಿಎಲ್ ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವೆ ಪರೀಕ್ಷಾರ್ಥ ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಿದೆ.ಇದು ನೇರಳೆ ಮಾರ್ಗ ಮೈಸೂರು ರಸ್ತೆಯ ವಿಸ್ತರಿತ ಮಾರ್ಗವಾಗಿದೆ. ಮಂಗಳವಾರ ಈ ಮಾರ್ಗದಲ್ಲಿ ಪರೀಕ್ಷಾರ್ಥ ಮೆಟ್ರೋ ರೈಲು ಸಂಚರಿಸಿದೆ. 2020ರ ಡಿಸೆಂಬರ್ ನಲ್ಲಿ ಬಿಎಂಆರ್‍ಸಿಎಲ್ ನೀಡಿದ್ದ ಮಾಹಿತಿ ಪ್ರಕಾರ 2021ರ ಆರಂಭದಲ್ಲಿಯೇ ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವೆ ಮೆಟ್ರೋ ರೈಲು ಸಂಚರಿಸಲಿದೆ. 7.5 ಕಿ.ಮೀ ಉದ್ದದ ವಿಸ್ತರಿಸಿದ ಮೆಟ್ರೋ ಮಾರ್ಗ ಇದಾಗಿದೆ. ಜೂನ್ 2021ರಲ್ಲಿ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಹಳಿಗಳ ವೀಕ್ಷಣೆ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಇವೆ.

NEWS DESK

TIMES OF BENGALURU