ಬೆಂಗಳೂರು : ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೂ ಕೊರೊನಾ ಮಹಾಮಾರಿ ಒಕ್ಕರಿಸಿದ್ದು, ಇಲ್ಲಿನ ಸಿಬ್ಬಂದಿಗಳಿಗೆ ಆತಂಕ ಎದುರಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿರುವ ಮೂವರು ಸಚಿವರ ಕಚೇರಿಯಲ್ಲಿನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೂವರು ಸಚಿವರ ಕಚೇರಿಗಳನ್ನು ತಾತ್ಕಾಲಿಕವಾಗಿ ಸೀಲ್ಡೌನ್ ಮಾಡಲಾಗಿದ್ದು, ಒಂದು ವಾರಗಳ ಕಾಲ ಸಿಬ್ಬಂದಿ ಕಚೇರಿಗೆ ಬಾರದಂತೆ ಸೂಚನೆ ಕೊಡಲಾಗಿದೆ.
ಇದೀಗ ಸಚಿವರ ಕಚೇರಿಗಳನ್ನೇ ಸೀಲ್ಡೌನ್ ಮಾಡಿರುವುದರಿಂದ ಅಕ್ಕಪಕ್ಕದಲ್ಲಿರುವ ಸಿಬ್ಬಂದಿಗಳಿಗೂ ಕೊರೊನಾ ಭೀತಿ ಕಾಡುತ್ತಿದೆ. ಹೆಸರು ಹೇಳಲು ಇಚ್ಛಿಸದ ಸಚಿವರ ಆಪ್ತರೊಬ್ಬರು ಇದನ್ನು ಬಹಿರಂಗಪಡಿಸಿದ್ದಾರೆ. ಒಂದು ವಾರ ಕಾಲ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದ್ದು, ಸದ್ಯಕ್ಕೆ ಎಲ್ಲ ಸಿಬ್ಬಂದಿಗಳು ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ(ಡಿಪಿಎಆರ್) ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.
NEWS DESK
TIMES OF BENGALURU