ಬೆಂಗಳೂರಿನಲ್ಲಿ ರಸ್ತೆಗಿಳಿದ 21 ಬಿಎಂಟಿಸಿ ಬಸ್‍ಗಳು

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ 21 ಬಿಎಂಟಿಸಿ ಬಸ್ ಗಳು ಮಾತ್ರ ಸಂಚಾರ ನಡೆಸಿವೆ. ರಾಜಧಾನಿ ಬೆಂಗಳೂರಿನಲ್ಲಿ 6400 ಬಿಎಂಟಿಸಿ ಬಸ್ ಗಳಿದ್ದು, ಪ್ರತಿಭಟನೆಯ ಮೊದಲ ದಿನವಾದ ಬುಧವಾರ 21 ಬಸ್ ಮಾತ್ರ ರಸ್ತೆಗಿಳಿದವು. ಚಾಲಕರು ಮತ್ತು ನಿರ್ವಾಹಕರು ಗೈರು ಹಾಜರಾದ ಹಿನ್ನೆಲೆಯಲ್ಲಿ ತರಬೇತಿ ಹಂತದಲ್ಲಿದ್ದ ಚಾಲಕರು ಮತ್ತು ನಿರ್ವಾಹಕರೊಂದಿಗೆ ಬಸ್ ಗಳನ್ನು ಇಲಾಖೆ ರೋಡಿಗಿಳಿಸಿತು. ಇದರಿಂದ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಲು ಪ್ರಯಾಣಿಕರು ಪರದಾಡುವಂತಾಯಿತು.

NEWS DESK

TIMES OF BENGALURU