ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ

ಬೆಂಗಳೂರು: ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಹೆಣ್ಣುಮಗು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸುಧಾ ಎಂಬುವರ ಪುತ್ರಿ ಅನ್ನಪೂರ್ಣೇಶ್ವರಿ ಮಂಗಳವಾರ ಸಂಜೆ ಕಾಣೆಯಾಗಿದ್ದಳು. ಈ ಮಗುವಿನ ಪಾಲಕರು ಕೂಲಿ ಕೆಲಸ ಮಾಡುತ್ತಿದ್ದು, ತಡರಾತ್ರಿವರೆಗೂ ಮಗುವಿಗಾಗಿ ಹುಡುಕಾಟ ನಡೆಸಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು. ಇಂದು ಬೆಳಗಿನಜಾವ ನಾಗರಬಾವಿ ದೀಪಾ ಕಾಂಪ್ಲೆಕ್ಸ್ ಬಳಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಯಾರೋ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು.

ಆದರೆ ಶವ ಪತ್ತೆಯಾದ ಕೆಲವೇ ಗಂಟೆಯಲ್ಲಿಪೊಲೀಸರಿಂದ ಕೊಲೆ ರಹಸ್ಯ ಬಯಲಾಗಿದ್ದು, ಈ ಮಗುವಿನ ಹೆತ್ತಮ್ಮನೇ ಕೊಲೆ ಆರೋಪಿ .ಮಗುವನ್ನ ತಾನೇ ಕೊಂದು ಹೈಡ್ರಾಮ ಮಾಡುತ್ತಿದ್ದ ತಾಯಿ ಸುಧಾಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಗೋಬಿ ಮಂಚೂರಿ ತಿನ್ನಿಸುವ ನೆಪದಲ್ಲಿ ಮಗುವನ್ನ ಕರೆದುಕೊಂಡು ಹೋಗಿದ್ದ ಸುಧಾ, ಈ ವೇಳೆ ಆಕೆಯನ್ನ ಕೊಂದು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಳು. ಸುಧಾ ಮತ್ತು ಈಕೆಯ ಗಂಡನ ನಡುವೆ ಆಗಾಗ್ಗೆ ಸಣ್ಣಪುಟ್ಟ ಗಲಾಟೆ ನಡೆಯುತ್ತಿತ್ತು. ಈ ವೇಳೆ ಈ ದಂಪತಿಯ ಮಗು ಅಪ್ಪನ ಪರವಾಗಿ ನಿಲ್ಲುತ್ತಿತ್ತಂತೆ. ಇದೇ ವಿಚಾರಕ್ಕೆ ಪುಟ್ಟ ಕಂದಮ್ಮನ ಮೇಲೆ ಹಗೆ ಸಾಧಿಸುತ್ತಿದ್ದ ಅಮ್ಮ, ಕೊನೆಗೂ ಅದರ ಉಸಿರು ನಿಲ್ಲಿಸಿದ್ದಾಳೆ.

NEWS DESK

TIMES OF BENGALURU