ಬೆಂಗಳೂರು: ಬೆಂಗಳೂರು ಹಾಗೂ ಜಪಾನ್ ನಡುವೆ ನೇರ ವಿಮಾನ ಹಾರಾಟ ಜೂನ್ನಿಂದ ಪ್ರಾರಂಭವಾಗಲಿದೆ. ಐಟಿ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ, ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿಗೆ ದೇಶ, ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನಿನ ಟೋಕಿಯೋ ನಡುವೆ ನೇರ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಲಾಗಿದೆ ಎಂದು ಜಪಾನ್ ಏರ್ಲೈನ್ಸ್ ಪ್ರಕಟಿಸಿದೆ.
NEWS DESK
TIMES OF BENGALURU