ಹನಿಟ್ರ‍್ಯಾಪ್ ಬಲೆಗೆ ಸಿಲುಕಿ ಯುವಕ ಆತ್ಮಹತ್ಯೆ

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ಪರಿಚಯವಾದ ಯುವತಿಯೊಬ್ಬಳಿಂದ ಹನಿಟ್ರ್ಯಾಪ್‍ಗೆ ಒಳಗಾಗಿ ಐಎಎಸ್ ಕನಸು ಕಂಡಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂಬಿಎ ವ್ಯಾಸಂಗ ಮುಗಿಸಿ ಐಎಎಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಅವಿನಾಶ್ . ಅದಕ್ಕಾಗಿ ಕೆ.ಆರ್.ಪುರಂನಲ್ಲಿರುವ ಕೋಚಿಂಗ್ ಸೆಂಟರ್‍ಗೂ ಹೋಗುತ್ತಿದ್ದ. ಈ ಮಧ್ಯೆ ಸಾಮಾಜಿಕ ಜಾಲತಾಣ ಫೇಸ್ ಬುಕ್‍ನ ನಕಲಿ ಖಾತೆಯಿಂದ ನೇಹಾ ಶರ್ಮಾ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗುತ್ತಿದ್ದಂತೆ ಆಕೆ ವಿಡಿಯೊ ಕಾಲ್ ಮಾಡಿದ್ದು, ಅದನ್ನು ಸ್ವೀಕರಿಸಿದ ಅವಿನಾಶ್‍ಗೆ ಪ್ರಚೋದಿಸಿದ್ದಾಳೆ.

ಇಬ್ಬರು ಅಶ್ಲೀಲವಾಗಿ ವಿಡಿಯೊ ಚಾಟಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಅದನ್ನು ಆಕೆ ಸಂಗ್ರಹಿಸಿಕೊಂಡಿದ್ದಾಳೆ. ಅನಂತರ ಆಕೆ ಸಂದೇಶ ಕಳುಹಿಸಿ ಕೂಡಲೇ ತಾನೂ ಸೂಚಿಸಿದ ಖಾತೆಗೆ ಹಣ ಹಾಕಬೇಕು. ಇಲ್ಲವಾದಲ್ಲಿ ಇ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ.ಅಲ್ಲದೇ ಆತನಿಂದ ಸುಮಾರು 35 ಸಾವಿರ ರೂ. ಹಣವನ್ನು ಪೀಕಿದ್ದಾಳೆ. ಮತ್ತೆ ಮತ್ತೆ ಹಣಕ್ಕೆ ಬೇಡಿಕೆಯಿಡುತ್ತಿದ್ದರಿಂದ ಮರ್ಯಾದೆಗೆ ಅಂಜಿಕೊಂಡು ಮಾ.23ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

NEWS DESK

TIMES OF BENGALURU