ತಾಯಿ – ಮಗನ ಬರ್ಬರ ಹತ್ಯೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬುಧವಾರ ಮಧ್ಯರಾತ್ರಿ ತಾಯಿ-ಮಗನ ಕೊಲೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಮತಾ ಬಸು(75) ಮತ್ತು ಇವರ ಪುತ್ರ ದೇವಬ್ರತಾ(41) ಕೊಲೆಯಾದವರು. ಒರಿಸ್ಸಾ ಮೂಲದ ಇವರು ಜೆಪಿ ನಗರದ ಸಂತೃಪ್ತಿ ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಿದ್ದರು. ಮಧ್ಯರಾತ್ರಿ 1.30ರ ಸುಮಾರಿಗೆ ಬೈಕ್‍ನಲ್ಲಿ ಬಂದಿದ್ದ ದುಷ್ಕರ್ಮಿಯೊಬ್ಬ ತಾಯಿ-ಮಗನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಮನೆಯಲ್ಲಿದ್ದ ಲ್ಯಾಪ್‍ಟಾಪ್, ಮೊಬೈಲ್, ಚಿನ್ನಾಭರಣ, ಎಟಿಎಂ ಕಾರ್ಡ್‍ಗಳನ್ನು ಹೊತ್ತೊಯ್ದಿದ್ದಾನೆ. ದೇವಬ್ರತಾಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಲೆಕ್ಟರರ್ ಕೆಲಸ ಸಿಕ್ಕಿತ್ತು. ಹಾಗಾಗಿ 20 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸ್ಥಳಕ್ಕೆ ಡಿಸಿಪಿ ಹರೀಶ್ ಪಾಂಡೆ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

NEWS DESK

TIMES OF BENGALURU