ಸರ್ಕಾರದ ವಿರುದ್ಧ ಖಾಸಗಿ ಬಸ್ ಮಾಲೀಕರು ಗರಂ

ಬೆಂಗಳೂರು: ಸಾರಿಗೆ ಇಲಾಖೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಿಂದಾಗಿ ಬಸ್ ಸೇವೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಏತನ್ಮಧ್ಯೆ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಸರ್ಕಾರ ಖಾಸಗಿ ಬಸ್ಗಳನ್ನು ಓಡಿಸಲು ಅನುವು ಮಾಡಿಕೊಟ್ಟಿದೆ. ಆದರೆ, ಇಲ್ಲಿಯೂ ಕೆಲವು ಸಮಸ್ಯೆಗಳಾಗುತ್ತಿದ್ದು, ಸರ್ಕಾರದ ವಿರುದ್ಧ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ಹೊರಹಾಕಿವೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಟೂರಿಸ್ಟ್ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಬೈರವ ಸಿದ್ದರಾಮಯ್ಯ ಅವರು, ಇನ್ಶುರೆನ್ಸ್ ಹಾಗೂ ಡಾಕ್ಯುಮೆಂಟ್ ಸರಿ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿ ಎಂದು ಸರ್ಕಾರ ಹೇಳಿದೆ. ಆದರೆ ಟ್ರಾಫಿಕ್   ಪೊಲೀಸರು ನಮ್ಮ ಮೇಲೆ ಫೈನ್ ಹಾಕುತ್ತಿದ್ದಾರೆ. ಈಗಾಗಲೇ ಇದರಿಂದ ಸಾಕಷ್ಟು ತೊಂದರೆ ಆಗ್ತಿದೆ ಎಂದು  ಆಕೋಶ ವ್ಯೆಕ್ತಪಡಿಸಿದ್ದಾರೆ.

NEWS DESK

TIMES OF BENGALURU