ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯಾ

ಬಿಚ್ಚುಗತ್ತಿ, ಅಮೃತಮತಿಯಂತಹ ಐತಿಹಾಸಿಕ ಚಿತ್ರಗಳ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಹರಿಪ್ರಿಯಾ, ಈಗ ಮಹಾತ್ಮ ಗಾಂಧಿ ಪತ್ನಿ ಕಸ್ತೂರಿ ಬಾ ಅವರ ಪಾತ್ರಕ್ಕೆ ಜೀವತುಂಬುವ ತಯಾರಿಯಲ್ಲಿದ್ದಾರೆ. ಹೌದು, ಕಸ್ತೂರ್‍ಬಾ ಅವರ ಜೀವನಾಧಾರಿತ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರಕ್ಕೆ ತಾಯಿ ಕಸ್ತೂರ್ ಗಾಂಧಿ ಎಂದು ಹೆಸರಿಡಲಾಗಿದ್ದು, ಈ ಚಿತ್ರದಲ್ಲಿ ಕಸ್ತೂರಿ ಬಾ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ.

ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಮಾತನಾಡುವ ಹರಿಪ್ರಿಯಾ, ಇಲ್ಲಿಯವರೆಗೆ ಗಾಂಧಿ ಜೀ ಬಗ್ಗೆ ಅನೇಕ ಸಿನಿಮಾಗಳು, ಡಾಕ್ಯುಮೆಂಟರಿಗಳು, ಕೃತಿಗಳು ಬಂದಿವೆ. ಪ್ರತಿಯೊಂದರಲ್ಲೂ ಗಾಂಧಿ ಜೀ ಅವರನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ, ಆಯಾಮದಲ್ಲಿ ಚಿತ್ರಿಸಲಾಗಿದೆ. ಆದರೆ ಗಾಂಧಿ ಜೀ ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರು ಅಂದ್ರೆ, ಅದು ಅವರ ಪತ್ನಿ ಕಸ್ತೂರಿ ಬಾ. ಈ ಸಿನಿಮಾದಲ್ಲಿ ಕಸ್ತೂರಿ ಬಾ ಅವರ ದೃಷ್ಟಿಕೋನದಲ್ಲಿ ಗಾಂಧಿ ಜೀ ಅವರನ್ನು ತೆರೆಮೇಲೆ ತರುವ ಪ್ರಯತ್ನ ಆಗುತ್ತಿದೆ. ಕಸ್ತೂರ್ ಬಾ ಅವರ ಕಣ್ಣಲ್ಲಿ ಗಾಂಧಿ ಹೇಗೆ ಕಾಣುತ್ತಾರೆ ಅನ್ನೋದೆ ಈ ಸಿನಿಮಾ ಎನ್ನುತ್ತಾರೆ.

NEWS DESK

TIMES OF BENGALURU