ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಸಾರಿಗೆ ನೌಕರರು ನಡೆಸುತ್ತಿರುವಂತ ಅನಿರ್ಧಿಷ್ಟಾವಧಿಯ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂತಹ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಾರಿಗೆ ನೌಕರರಿಗೆ ಈ ಸಂದರ್ಭದಲ್ಲಿ ವೇತನ ಜಾರಿ ಸಾಧ್ಯವಿಲ್ಲ ಎಂದಿದ್ದಾರೆ. ಇದರ ಮಧ್ಯೆಯೂ ಮುಷ್ಕರ ಮುಂದುವರೆದಿದ್ದು, ನೌಕರರ ಮುಷ್ಕರದಿಂದಾಗಿ ರಾಜ್ಯಾಧ್ಯಂತ ಸಾರಿಗೆ ಬಸ್ ಗಳ ಸಂಚಾರ ವಿರಳವಾಗಿದೆ. ಇಂದು 11 ಗಂಟೆಯ ವೇಳೆಗೆ ರಾಜ್ಯಾಧ್ಯಂತ ಕೆಎಸ್ ಆರ್ ಟಿಸಿ 186 ಬಸ್, ಬಿಎಂಟಿಸಿ 67 ಬಸ್, ಎನ್ಈ ಕೆಎಸ್ ಆರ್ ಟಿಸಿ 159 ಬಸ್, ಎನ್ ಡಬ್ಲ್ಯೂಕೆಎಸ್ ಆರ್ ಟಿಸಿ 62 ಸೇರಿದಂತೆ ಒಟ್ಟು 474 ಸಾರಿಗೆ ಬಸ್ ಸಂಚಾರ ನಡೆಸಿರುವುದಾಗಿ ನಿಗಮ ಮಾಹಿತಿ ನೀಡಿದೆ.
NEWS DESK
TIMES OF BENGALURU