ಯಾರದೋ ಮಾತು ಕೇಳಿ ಹಠ ಮಾಡಬೇಡಿ

ಬೆಂಗಳೂರು: ಸಾರಿಗೆ ನೌಕರರು ಹಠ ಬಿಟ್ಟು ಬಸ್‍ಗಳನ್ನು ಓಡಿಸಬೇಕು, 6ನೇ ವೇತನ ಆಯೋಗದ ಶಿಫಾರಸು ಒಪ್ಪಲಾಗದು. ಈಡೇರಿಸಿದ 8 ಬೇಡಿಕೆಗಳಲ್ಲಿ ಲೋಪದೋಷಗಳಿದ್ದರೆ ಹೇಳಿ, ಸರಿ ಮಾಡೋಣವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು ಆದಾಯದ ಶೇ.86ರಷ್ಟು ಆದಾಯ ವೇತನ, ಪಿಂಚಣಿಗೆ ಖರ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 6ನೇ ವೇತನ ಆಯೋಗದ ಶಿಫಾರಸು ಅನ್ವಯಿಸುವುದು ಸಾಧ್ಯವಿಲ್ಲ.ಯಾರದೋ ಮಾತು ಕೇಳಿ ಹಠ ಮಾಡಬೇಡಿ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಅರ್ಥ ಮಾಡಿಕೊಳ್ಳಿರಿ. ಯಾರ ಜತೆ ಮಾತನಾಡುವುದು ಎಂದು ಮರು ಪ್ರಶ್ನಿಸಿದ ಸಿಎಂ ಬಿಎಸ್ ವೈ ಪರೋಕ್ಷವಾಗಿ ಕೋಡಿಹಳ್ಳಿ ಜತೆಗೆ ಮಾತುಕತೆ ಅಸಾಧ್ಯವೆಂಬ ಸುಳಿವು ನೀಡಿದರು.

NEWS DESK

TIMES OF BENGALURU