ಎಟಿಎಂ ಹಣ ಕಳುವಿಗೆ ಯತ್ನ ; ಆರೋಪಿಯ ಬಂಧನ

ಬೆಂಗಳೂರು : ಎಟಿಎಂ ಮಿಷನ್ ಗಳನ್ನು ಡ್ಯಾಮೇಜ್ ಮಾಡಿ ಹಣ ಕಳವು ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಿಜ್ವಾನ್(28) ಬಂಧಿತ ಆರೋಪಿ. ಈತನಿಂದ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ಲಕ್ಷ ರೂ. ಬೆಲೆ ಬಾಳುವ 12 ವಿವಿಧ ಕಂಪನಿಯ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಏ.6ರಂದು ಬೆಳಗಿನ ಜಾವ 2.30ರ ಸುಮಾರಿನಲ್ಲಿ ಬಸವೇಶ್ವರನಗರ 15ನೇ ಮುಖ್ಯರಸ್ತೆ, ಐಸಿಸಿಐ ಬ್ಯಾಂಕ್‍ನ ಎಟಿಎಂನಲ್ಲಿ ವ್ಯಕ್ತಿಯೊಬ್ಬ ಎಟಿಎಂ ಮಿಷನ್‍ಗಳನ್ನು ಡ್ಯಾಮೇಜ್ ಮಾಡಿ ಹಣ ಕಳವು ಮಾಡಲು ಯತ್ನಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಇನ್‍ಸ್ಪೆಕ್ಟರ್ ಯರ್ರಿಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ.

NEWS DESK

TIMES OF BENGALURU