ಮಾರ್ಗಸೂಚಿ ಕಡೆಗಣಿಸಿರುವ ಉದ್ದಿಮೆಗಳಿಗೆ ದಂಡ

ಬೆಂಗಳೂರು: ಕೋವಿಡ್ ನಿಯಂತ್ರಣದ ಮಾರ್ಗಸೂಚಿ ಕಡೆಗಣಿಸಿರುವ ಹೋಟೆಲ್, ಮಳಿಗೆಗಳು ಸೇರಿ 28 ಉದ್ದಿಮೆಗಳಿಗೆ ಬಿಬಿಎಂಪಿ ಅಧಿಕಾರಿಗಳು ನಿನ್ನೆ ಬಾಗಿಲು ಹಾಕಿಸಿದರು. ಪಶ್ಚಿಮ ವಲಯದಲ್ಲಿ ಗಾಂಧಿನಗರದ ಲಾಸ್ಸೊ ಬಾರ್ ಮತ್ತು ರೆಸ್ಟೋರೆಂಟ್, ಟೀ ಅಂಗಡಿ, ರಶ್ಮಿ ಫ್ಯಾನ್ಸಿ ಅಂಗಡಿ, ಪೂನಂ ಕಾಂಡಿಮೆಂಟ್ಸ್ ಮಳಿಗೆ, ಶ್ರೀಕೃಷ್ಣ ಬೇಕರಿಗಳಿಗೆ ಅಧಿಕಾರಿಗಳು ಬೀಗ ಹಾಕಿಸಿದ್ದಾರೆ. ಈ ವಲಯದಲ್ಲಿ 17 ಮಳಿಗೆಗಳಿಗೆ ಒಟ್ಟು 15,100 ದಂಡ ವಿಧಿಸಿದ್ದಾರೆ.

ಪೂರ್ವ ವಲಯದಲ್ಲಿ ಶಿವಾಜಿನಗರದ ರವಿ ಟೀ ಅಂಗಡಿ, ವಿನಾಯಕ ಚಿಪ್ಸ್, ಡಿಸೋಜ ಜ್ಯೂಸ್ ಸೆಂಟರ್, ಹೆಬ್ಬಾಳದ ಬಸವೇಶ್ವರ ಪ್ರಾವಿಷನಲ್ ಸ್ಟೋರ್, ಶಾಂತಿನಗರದ ಉಡುಪಿ ಹೋಟೆಲ್, ಮೇಘನಾ ಫುಡ್ ಆಯಂಡ್ ರೆಸ್ಟೋರಂಟ್, ಸಿ.ವಿ.ರಾಮನ್‍ನಗರದ ಕಬ್ಬಾಳಮ್ಮ ಕಾಂಡಿಮೆಂಟ್ಸ್, ಗೋಲ್ಡನ್ ಸಿಜರ್ ಸಲೂನ್, ಟೈಮ್ ಪಾಸ್ ಮಳಿಗೆ, ಫ್ರುಟ್ ಫೇಸ್ ಜ್ಯೂಸ್ ಮಳಿಗೆ, ಶರೀಫ್ ಅವರ ಟೀ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಶಿವಾಜಿನಗರದ ನೋಬಲ್ ಸೂಪರ್ ಮಾರ್ಕೆಟ್‍ಗೆ 25 ಸಾವಿರ ಹಾಗೂ ಶಾಂತಿನಗರದ ನಾಗಾರ್ಜುನ ರೆಸ್ಟೋರಂಟ್‍ಗೆ 10 ಸಾವಿರ ದಂಡ ವಿಧಿಸಲಾಗಿದೆ. ಪೂರ್ವ ವಲಯದಲ್ಲಿ ವಿವಿಧ ಮಳಿಗೆಗಳಿಗೆ ಒಟ್ಟು 58 ಸಾವಿರ ದಂಡ ವಿಧಿಸಲಾಗಿದೆ.

NEWS  DESK

TIMES OF BENGALURU