ಮುಂಬೈ ವಿರುದ್ಧ ಆರ್ ಸಿಬಿಗೆ ಭರ್ಜರಿ ಗೆಲುವು

ಐಪಿಎಲ್ 14ನೇ ಸರಣಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನು 2 ವಿಕೆಟ್‍ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಆರ್‍ಸಿಬಿ ಆಟಗಾರರಾದ ಹರ್ಷಲ್ ಪಟೇಲ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಕೈಲ್ ಜೇಮ್ಸನ್ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆಸಿದ್ದಾರೆ.

ಹರ್ಷಲ್ ಪಟೇಲ್, ಐಪಿಎಲ್ ನ ಮೊದಲ ಪಂದ್ಯದಲ್ಲಿಯೇ 5 ವಿಕೆಟ್ ಪಡೆದ ಹರ್ಷಲ್ ಗಮನ ಸೆಳೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಟೇಲ್ ಪಾತ್ರರಾಗಿದ್ದಾರೆ.

 

NEWS DESK

TIMES OF BENGALURU