ನೈಟ್ ಕರ್ಫ್ಯೂ; 61 ವಾಹನಗಳು ಜಪ್ತಿ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ನಗರದಲ್ಲಿ ಶನಿವಾರ ರಾತ್ರಿ ಜಾರಿ ಮಾಡಿದ್ದ ಕರ್ಫ್ಯೂ ವೇಳೆ 61 ವಾಹನಗಳನ್ನು ಆಗ್ನೇಯ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿತ್ತು. ಇದೇ ಸಂದರ್ಭದಲ್ಲಿ ಕೆಲವರು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುತ್ತಿದ್ದರು. ಅಂಥವರ ತಡೆದು ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ 55 ದ್ವಿಚಕ್ರ ವಾಹನ, 5 ಕಾರುಗಳು ಹಾಗೂ ಆಟೊ ಜಪ್ತಿ ಮಾಡಲಾಗಿದೆ.

NEWS DESK

TIMES OF BENGALURU