ಮಕ್ಕಳ ಮಾರಾಟ ಮಾಡುತ್ತಿದ್ದ ಮಹಿಳೆಯರ ಬಂಧನ

ಬೆಂಗಳೂರು: ನಗರದಲ್ಲಿ ಮಕ್ಕಳನ್ನು ಕದ್ದು ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಮಹಿಳೆಯರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದೇವಿ ಹಾಗೂ ಮುಂಬೈನ ರಂಜಿತಾ ಬಂಧಿತರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ದೇವಿ, ಶಿವಾಜಿನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ರಂಜಿತಾ ಜೊತೆ ನಿರಂತರವಾಗಿ ಒಡನಾಟವಿಟ್ಟುಕೊಂಡು ಕೃತ್ಯ ಎಸಗುತ್ತಿದ್ದಳು ಎಂದು ಪೊಲೀಸ್ ಮೂಲಗಳು ಹೇಳಿವೆ. ಪಿಯುಸಿ ವ್ಯಾಸಂಗ ಮಾಡಿದ್ದ ರಂಜಿತಾ, ಮಕ್ಕಳಾಗದವರಿಗಾಗಿ ಬಾಡಿಗೆ ತಾಯಂದಿರನ್ನು ಹುಡುಕುವ ಕೆಲಸ ಮಾಡುತ್ತಿದ್ದಳು. ಅದರಿಂದಾಗಿ ಹಲವು ಜನರು ಆಕೆಗೆ ಪರಿಚಯವಾಗಿದ್ದರು. ದೇವಿ ಜೊತೆ ಸೇರಿ ತನ್ನದೇ ಜಾಲ ರೂಪಿಸಿಕೊಂಡು ಮಕ್ಕಳ ಮಾರಾಟ ಮಾಡಲಾರಂಭಿಸಿದ್ದಳು ಎಂದೂ ಮೂಲಗಳು ತಿಳಿಸಿವೆ.

NEWS DESK

TIMES OF BENGALURU