ಮಾರುಕಟ್ಟೆಗಳಲ್ಲಿ ತಗ್ಗಿದ ಗ್ರಾಹಕರ ಸಂಖ್ಯೆ

ಬೆಂಗಳೂರು: ಯುಗಾದಿ ಹಬ್ಬಕ್ಕೆ ಮಾರುಕಟ್ಟೆಗಳು ಪ್ರತಿ ವರ್ಷದಂತೆ ವ್ಯಾಪಾರಕ್ಕೆ ಸಜ್ಜಾಗಿವೆ. ಆದರೆ, ಕೊರೊನಾ ಕಾರಣದಿಂದ ಮಾರುಕಟ್ಟೆಗೆ ಬರುವ ಗ್ರಾಹಕರು ಕಡಿಮೆಯಾಗಿದ್ದು, ವ್ಯಾಪಾರ ನೀರಸವಾಗಿದೆ ಎಂದು ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಕಳೆದ ಯುಗಾದಿ ವೇಳೆ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಹೇರಲಾಗಿತ್ತು. ಆದರೆ, ಹಬ್ಬಕ್ಕಾಗಿ ಮಾರುಕಟ್ಟೆಗಳಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.

ಈ ಕಾರಣದಿಂದ ಹೂವು, ಹಣ್ಣು, ತರಕಾರಿ ದರಗಳು ದಿಢೀರ್ ಏರಿಕೆ ಕಂಡಿದ್ದವು. ಆದರೆ, ಈ ಬಾರಿ ಮಾರುಕಟ್ಟೆಗಳು ಎಂದಿನಂತೆ ತೆರೆದಿದ್ದರೂ ಹಬ್ಬದ ಖರೀದಿಗೆಂದು ಬರುತ್ತಿರುವ ಗ್ರಾಹಕರು ವಿರಳವಾಗಿದ್ದರು. ಮಲ್ಲೇಶ್ವರ, ಯಶವಂತಪುರ, ಬನಶಂಕರಿ, ಗಾಂಧಿಬಜಾರ್, ಇಂದಿರಾನಗರ, ವಿಜಯನಗರ, ಕೆ.ಆರ್.ಪುರ ಸೇರಿದಂತೆ ನಗರದಾದ್ಯಂತ ಹಬ್ಬಕ್ಕಾಗಿ ಕಿರು ಮಾರುಕಟ್ಟೆಗಳನ್ನು ತೆರೆಯಲಾಗಿದೆ. ಆದರೆ, ಮಳಿಗೆಗಳ ಬಳಿ ಬೆರಳೆಣಿಕೆಯಷ್ಟು ಗ್ರಾಹಕರು ಭಾನುವಾರ  ಕಂಡು ಬಂದರು.

NEWS DESK

TIMES OF BENGALURU