ಇಂದು ಅಣ್ಣಾವ್ರ 15ನೇ ವರ್ಷದ ಪುಣ್ಯಸ್ಮರಣೆ

ಬೆಂಗಳೂರು : ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಅಗಲಿ ಇಂದಿಗೆ 15 ವರ್ಷಗಳೇ ಕಳೆಯುತ್ತಿವೆ. ಆದ್ರೇ.. ಅಣ್ಣಾವ್ರು ದೈಹಿಕವಾಗಿ ಅಭಿಮಾನಿಗಳನ್ನು ಅಗಲಿದ್ದರೂ, ಸಹ ಅವರು ಮಾನಸಿಕವಾಗಿ ಅಭಿಮಾನಿಗಳ ಹೃದಯದಲ್ಲಿ ಸದಾ ಆರಾಧ್ಯ ದೈವರಾಗಿದ್ದಾರೆ. ಅಲ್ಲದೇ ಸದಾ ಡಾ.ರಾಜ್ ಕುಮಾರ್ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅನೇಕ ಚಿತ್ರಗಳ ಮೂಲಕ ಶಾಶ್ವತವಾಗಿಯೇ ನೆಲೆಸಿದ್ದಾರೆ. ಇಂತಹ ರಣಧೀರ ಕಂಠೀರವ ನಮ್ಮನೆಲ್ಲ ಅಗಲಿ ಇಂದಿಗೆ 15 ವರ್ಷಗಳು ತಲುಪಿದ ಸಂದರ್ಭದಲ್ಲಿ ಅವರ ಪುಣ್ಯಸ್ಮರಣೆಯನ್ನು ಕುಟುಂಬಸ್ಥರು ನೆರವೇರಿಸಿದರು.

ಇಂದು 15ನೇ ವರ್ಷದ ಅಣ್ಣಾವ್ರ ಪುಣ್ಯ ಸ್ಮರಣೆಯಿಂದಾಗಿ, ಬೆಳಿಗ್ಗೆ ನಟ ರಾಘವೇಂದ್ರ ರಾಜ್ ಕುಮಾರ್, ಪತ್ನಿ ಮಂಗಳ ಕಂಠೀರವ ಸ್ಟೂಡಿಯೋದಲ್ಲಿರುವ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಮಾಧಿ ಬಳಿ ತೆರಳಿ, ಪೂಜೆ ಸಲ್ಲಿಸಿದರು. ನಟ ಶಿವರಾಜ್ ಕುಮಾರ್ ಹಾಗೂ ನಟ ಪುನೀತ್ ರಾಜ್ ಕುಮಾರ್ ಕುಟುಂಬದವರು ಆಗಮಿಸಿ, ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಪೂಜಾ ಕೈಂಕರ್ಯ ನೆರವೇರಿಸಿದರು.

NEWS DESK

TIMES OF BENGALURU