ಬೆಂಗಳೂರು: ಕೋವಿಡ್ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ಕೋವಿಡ್ ಇದ್ರೂ ತುರ್ತು ಪರಿಸ್ಥಿತಿ ಇರೋದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಹೇಳಿದರು. ಇನ್ನು ಜನರು ಅನಗತ್ಯವಾಗಿ ಸೇರೋದು ಬಿಡಬೇಕು. ನಾವೇ ನಿಬಂಧನೆ ಹಾಕಿಕೊಂಡ್ರೆ ಲಾಕ್ಡೌನ್ ಮಾಡೋ ಅವಶ್ಯಕತೆ ಇಲ್ಲ, ಸರ್ಕಾರ ಏನೆಲ್ಲ ಮಾಡಬೇಕೋ, ಪೂರ್ವಯೋಜಿತವಾಗಿ ಮಾಡುತ್ತಿದ್ದೇವೆ. ಲಾಕ್ ಡೌನ್ ಮಾಡುತ್ತೇವೆ ಅಂತ ಸಿಎಂ ಆಗಲಿ, ನಾನಾಗಲಿ ಹೇಳಿಲ್ಲ, ನಮಗೆ ಸುತಾರಾಮ್ ಇಷ್ಟ ಇಲ್ಲ, ಲಾಕ್ಡೌ ನ್ನಿಂದ ಎಷ್ಟು ಆರ್ಥಿಕ ಕಷ್ಟ ಇದೆ ಅನ್ನೋದು ಗೊತ್ತಿದೆ. ದಯವಿಟ್ಟು ಸಹಕರಿಸಿ ಅಂತ ಮನವಿ ಎಂದಿದ್ದಾರೆ.
ಸದ್ಯ ಯುಗಾದಿ ಎಲ್ಲರಿಗೂ ದೊಡ್ಡ ಹಬ್ಬ. ಕೋವಿಡ್ ಬಂದಿದ್ದು, ಲಸಿಕೆ ಎಲ್ಲರೂ ಪಡೆಯಿರಿ. ಬೇವು ಕೋವಿಡ್, ಬೆಲ್ಲ ಲಸಿಕೆ. ಎಲ್ಲರೂ ಲಸಿಕೆ ಪಡೆಯಿರಿ. ಹಳ್ಳಿಗೆ ಹೋಗೋದು ಕಡಿಮೆ ಮಾಡಿ ಅಂತ ಮನವಿ. ಅವರು ಸುರಕ್ಷಿತವಾಗಿ ಇರಲಿ, ಇಲ್ಲಿಂದ ರೋಗ ತೆಗೆದುಕೊಂಡು ಹೋಗೋದು ಬೇಡ, ಹಳ್ಳಿಯವರು ಎಚ್ಚರಿಕೆಯಿಂದ ಇದ್ದಾರೆ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಹೇಳಿದರು.
NEWS DESK
TIMES OF BENGALURU