ಪತಿಯ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆಗೈದ ಪತ್ನಿ

ಬೆಂಗಳೂರು: ಪತ್ನಿಯೇ ಪತಿಯ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆಗೈದಿರುವ ಘಟನೆ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಓಬಳೇಶ್ ಕಾಲೋನಿ ನಿವಾಸಿ ಮೋಹನ್ (41) ಮೃತರು. ಪತ್ನಿ ಪದ್ಮಾ ಎಂಬವರನ್ನು ಪೆÇಲೀಸರು ಬಂಧಿಸಿದ್ದಾರೆ.

ಮೋಹನ್ ಮತ್ತು ಪದ್ಮಾ ಬಿಬಿಎಂಪಿ ಪೌರ ಕಾರ್ಮಿಕರಾಗಿದ್ದು, ಮೋಹನ್ ಕಸದ ಆಟೋ ಚಾಲಕನಾಗಿದ್ದಾನೆ. 2004ರಲ್ಲಿ ಮೋಹನ್, ಪದ್ಮಾ ಮದುವೆಯಾಗಿದ್ದು, ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೋಹನ್‍ಗೆ ಮದ್ಯ ಸೇವನೆ ಚಟವಿತ್ತು. ಜತೆಗೆ ಇತ್ತೀಚೆಗೆ ಆನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆರು ತಿಂಗಳ ಹಿಂದೆ ಕುಡಿತದ ಚಟ ಬಿಡಿಸುವ ಪುರ್ನವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ಕೆಲ ದಿನ ಗಳ ಕಾಲ ಮೋಹನ್ ಮದ್ಯದಿಂದ ದೂರವಿದ್ದರು. ಅನಂತರ ಮತ್ತೆ ಕುಡಿಯಲು ಆರಂಭಿಸಿದ್ದರು. ಅನಂತರ ಮಧ್ಯಾಹ್ನ 3.15ರ ಸುಮಾರಿಗೆ ಮತ್ತೆ ಮೋಹನ್ ಪತ್ನಿ ಜತೆ ಅದೇ ವಿಚಾರವಾಗಿ ಜಗಳವಾಡಿದ್ದು, ಹಲ್ಲೆ ನಡೆಸಲು ಬಂದ ಪತಿಯನ್ನು ಪದ್ಮಾ ಪಕ್ಕಕ್ಕೆ ತಳ್ಳಿದ್ದಾಳೆ. ಈ ವೇಳೆ ಕೆಳಗೆ ಬಿದ್ದ ಮೋಹನ್ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದಿದ್ದಾರೆ. ಆಗ ಅಸ್ವಸ್ಥಗೊಂಡ ಮೋಹನ್‍ನನ್ನು ಆಕೆಯೇ ಸ್ಥಳೀಯರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಕರೆ ದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‍ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

NEWS DESK

TIMES OF BENGALURU