ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಯುಗಾದಿ ಹಬಕ್ಕೂ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಹೂವು, ಹಣ್ಣು, ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಹೌದು, ಯುಗಾದಿ ಪ್ರಯುಕ್ತ ನಗರದ ಕೆ.ಆರ್. ಮಾರ್ಕೆಟ್, ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಗ್ರಾಹಕರು ಹೂ, ಹಣ್ಣು ಖರೀದಿಯಲ್ಲಿ ಬ್ಯುಸಿಯಾಗಿದ್ರು, ಹಬ್ಬಕ್ಕೆ ತಳಿರು-ತೋರಣ ಸೇರಿದಂತೆ ಬೇವು ಬೆಲ್ಲ ಖರೀದಿಸಿದ್ದಾರೆ. ಈ ಬಾರಿ ಹೂವು, ಹಣ್ಣಿನ ಬೆಲೆ ಭಾರೀ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಕನಕಾಂಬರ ಹೂವು ಕೆಜಿಗೆ 250 ರೂ. ಇದ್ದರೆ, ಚಂಡೂ ಹೂವು 200 ರೂ. ಮಲ್ಲಿಗೆ ಹೂವು 100 ರೂ. ಗಡಿ ದಾಟಿದೆ. ಸೇವಂತಿಗೆ 250 ರೂ. ಮಲ್ಲಿಗೆ ಹೂವು 300 ರೂ.ನಿಂದ 500 ರೂ.ವರೆಗೆ ಮಾರಾಟವಾಗಿದೆ. ಇನ್ನು ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು, ದ್ರಾಕ್ಷಿಹಣ್ಣು ಕೆಜಿಗೆ 80 ರೂ. ನಿಂದ 100 ರೂ. ಕಿತ್ತಳೆಹಣ್ಣು ನಾಲ್ಕಕ್ಕೆ 100 ರೂ. ಸಪೋಟ ಕೆಜಿಗೆ 60 ರಿoದ 80 ರೂ. ಕಲ್ಲಂಗಡಿ ಕೆಜಿಗೆ 40 ರೂ. ಬಾಳೆ ಹಣ್ಣು ಡಜನ್ ಗೆ 50 ರೂ.ನಿಂದ 100 ರೂ.ವರೆಗೆ ಮಾರಾಟವಾಗಿದೆ.

NEWS DESK

TIMES OF BENGALURU