ಕೋವಿಡ್ ಜೊತೆ ಚಾನ್ಸ್ ತಗೋಬೇಡಿ

ಬೆಂಗಳೂರು: ಕನ್ನಡ ಚಿತ್ರರಂಗದ ನೆಮ್ಮೆಲ್ಲರ ಪ್ರೀತಿಯ ರವಿಮಾಮ ಎಲ್ಲರಿಗೂ ಯುಗಾದಿ ಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ಪ್ರೇಮಲೋಕದ ದೊರೆ ಇಂದು ಅಧಿಕೃತವಾಗಿ ಸೋಷಿಯಲ್ ಮೀಡಿಯಾಗಳಿಗೆ ಎಂಟ್ರಿ ಕೊಟ್ಟಿದ್ದಾರೆ.

ಒನ್ ಆಯಂಡ್ ಓನ್ಲಿ ರವಿಚಂದ್ರನ್ ಎಂಬುದು ಅವರ ಅಧಿಕೃತ ಖಾತೆಗಳ ಹೆಸರು. ಮೊದಲ ದಿನವೇ ಅವರು ಅಭಿಮಾನಿಗಳ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಿಗೆ ಪದಾರ್ಪಣೆ ಮಾಡಿರುವ ರವಿಚಂದ್ರನ್ ಅವರು ತಮ್ಮ ಅಭಿಮಾನಿಗಳಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಅದರಿಂದ ಸಾವು ಸಂಭವಿಸುತ್ತದೆ. ಈ ಮಾತನ್ನು ಎಲ್ಲ ಸಿಗರೇಟ್ ಪ್ಯಾಕ್ ಮೇಲೆ ಬರೆದಿರುತ್ತಾರೆ.

ಸಿನಿಮಾಗೆ ಹೋದರೆ ಮೊದಲು ತೋರಿಸೋದೇ ಇದು. ಆದರೂ ಯಾರು ಸಿಗರೇಟ್ ಸೇದೋದನ್ನು ಕಡಿಮೆ ಮಾಡಿಲ್ಲ. ಸರ್ಕಾರಕ್ಕೆ ಇದರಿಂದ ಆದಾಯವೂ ಕಡಿಮೆ ಆಗಿಲ್ಲ. ಯಾಕೆಂದರೆ ನಮ್ಮಲ್ಲಿ ಒಂದು ಗುಣ ಇದೆ. ನಾವು ಎಲ್ಲದಕ್ಕೂ ಚಾನ್ಸ್ ತಗೊಳ್ತೀವಿ. ತಪ್ಪು ಅಂತ ಗೊತ್ತಿದ್ದರೂ ತಪ್ಪು ಮಾಡುವ ಗುಣ ನಮ್ಮಲ್ಲಿದೆ. ಅಬ್ಬಬ್ಬಾ ಎಂದರೆ ಕ್ಷಮೆ ಕೇಳಿ ಸರಿಮಾಡಿಕೊಳ್ಳಬಹುದು ಎಂದುಕೊಳ್ಳುತ್ತೇನೆ. ಕೋವಿಡ್ ಜೊತೆ ಚಾನ್ಸ್ ತಗೋಬೇಡಿ. ಒಳ್ಳೇದಲ್ಲ. ನಾನು ಸಿಗರೇಟ್ ಸೇದೋದು ಸಿನಿಮಾದಲ್ಲಿ ಮಾತ್ರ. ಪಾತ್ರಗಳಿಗಾಗಿ ಮಾತ್ರ ಎಂದು ರವಿಚಂದ್ರನ್ ಹೇಳಿದ್ದಾರೆ.

NEWS DESK

TIMES OF BENGALURU