ಮೆಜೆಸ್ಟಿಕ್ ನಲ್ಲಿ ಖಾಸಗಿ ವಾಹನಗಳ ದರ್ಬಾರ್

ಬೆಂಗಳೂರು: ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 7ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಸಾರಿಗೆ ಬಸ್‍ಗಳಿಲ್ಲದೇ ಯುಗಾದಿ ಹಬ್ಬದ ದಿನ ಪ್ರಯಾಣಿಕರು ಪರದಾಡುವಂತಾಗಿದ್ದು, ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಓಡಾಟ ಹೆಚ್ಚಾಗಿ ಕಂಡುಬಂದಿದೆ.

ಇಂದು ಯುಗಾದಿ, ನಾಳೆ ಅಂಬೇಡ್ಕರ್? ಜಯಂತಿ ಹೀಗೆ ಸಾಲು.. ಸಾಲು.. ಸರ್ಕಾರಿ ರಜೆ ಇರುವ ಕಾರಣದಿಂದಾಗಿ ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಆದರೆ, ಕೆಎಸ್ ಆರ್ ಟಿಸಿ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದು, ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಳೆದ 6 ದಿನಗಳಂತೆ ಮೆಜೆಸ್ಟಿಕ್‍ನಲ್ಲಿ ಖಾಸಗಿ ವಾಹನಗಳ ಸಂಚಾರ ಜೋರಾಗಿದೆ.

NEWS DESK

TIMES OF BENGALURU