ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ

ಬೆಂಗಳೂರು: ಕೋರಮಂಗಲದ ರೆಸ್ಟೋರೆಂಟ್ ವೊಂದರ ಮಾಲೀಕ ನಿಖಿಲ್ ಹೆಗ್ಡೆ ಎಂಬವರು 50 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಬಹುಭಾಷಾ ನಟಿ ಸಂಜನಾ ಗಲ್ರಾನಿಯ ಸಹೋದರಿ ನಿಕ್ಕಿ ಗಲ್ರಾನಿ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಟಿ ನಿಕ್ಕಿ ಗಲ್ರಾನಿ ದೂರು ಆಧಾರಿಸಿ ನಿಖೀಲ್ ಹೆಗ್ಡೆ ವಿರುದ್ಧ ಎಫ್‍ಐಆರ್ ದಾಖಲಾಗಿದೆ. 2016ರ ಡಿಸೆಂಬರ್‍ನಲ್ಲಿ ಕೋರಮಂಗಲದಲ್ಲಿರುವ ರೆಸ್ಟೋರೆಂಟ್ ಆಂಡ್ ಕೆಫೆ ಸ್ಥಾಪಿಸಲು 50 ಲಕ್ಷ ರೂ. ಹೂಡಿಕೆ ಮಾಡುವಂತೆ ನಿಖೀಲ್ ಹೆಗ್ಡೆ ಕೇಳಿದ್ದರು.

ಪ್ರತಿ ತಿಂಗಳು ಲಾಭವಾಗಿ ಒಂದು ಲಕ್ಷ ನೀಡುವುದಾಗಿ ಹೇಳಿದ್ದರು. 2016ರ ಡಿಸೆಂಬರ್‍ನಲ್ಲಿ ಕೋರಮಂಗಲದಲ್ಲಿರುವ ರೆಸ್ಟೋರೆಂಟ್ ಆಂಡ್ ಕೆಫೆ ಸ್ಥಾಪಿಸಲು 50 ಲಕ್ಷ ರೂ. ಹೂಡಿಕೆ ಮಾಡುವಂತೆ ನಿಖಿಲ್ ಹೆಗ್ಡೆ ಕೇಳಿದ್ದರು. ಪ್ರತಿ ತಿಂಗಳು ಲಾಭವಾಗಿ ಒಂದು ಲಕ್ಷ ನೀಡುವುದಾಗಿ ಹೇಳಿದ್ದರು. ಹೀಗಾಗಿ ಕೆಂಪಾಪುರದಲ್ಲಿರುವ ಮನೆಯಲ್ಲಿ ನಿಖೀಲ್ ಹೆಗ್ಡೆ ಅವರಿಗೆ ನನ್ನ ಪೆÇೀಷಕರ ಸಮ್ಮುಖದಲ್ಲಿ ಅಗ್ರಿಮೆಂಟ್ ಮಾಡಿ 50 ಲಕ್ಷ ರೂ. ಕೊಟ್ಟಿದ್ದೇನೆ. ನಂತರ ಯಾವುದೇ ರೀತಿಯ ಲಾಭದ ಹಣ ಕೊಡದೇ, ರೆಸ್ಟೋರೆಂಟ್ ವ್ಯವಹಾರಕ್ಕೆ ಕೊಟ್ಟ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ನಿಕ್ಕಿ ಗಲ್ರಾನಿ ಆರೋಪಿಸಿದ್ದಾರೆ.

NEWS DESK

TIMES OF BENGALURU