ಗಾಂಜಾ ಜಪ್ತಿ: ಇಬ್ಬರ ಬಂಧನ

ಬೆಂಗಳೂರು: ಹೊರ ರಾಜ್ಯದಿಂದ ಗಾಂಜಾ ತರಿಸಿಕೊಂಡು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದ ಚಡ್ಡ ಕೃಷ್ಣನ್ (22) ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮೂರ್ತಿ (40) ಬಂಧಿತ ಆರೋಪಿಗಳು. ಕೋರಮಂಗಲದ ಬಳ್ಳಾರಿ ಕಾಲೊನಿ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡಲು ಬಂದಿದ್ದರು.

ಈ ಮಾಹಿತಿ ಆಧರಿಸಿ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ 84.60 ಲಕ್ಷ ಮೌಲ್ಯದ 141 ಕೆ.ಜಿ ಗಾಂಜಾ, ತೂಕದ ಯಂತ್ರ, ಒಂದು ವಾಹನ, 4 ಸಾವಿರ ನಗದು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

NEWS DESK

TIMES OF BENGALURU