ಎಸ್.ಎ.ಐ ಕೇಂದ್ರದ 8 ಮಂದಿಗೆ ಕೊರೊನಾ

ಬೆಂಗಳೂರು: ಗಂಭೀರ ಬೆಳವಣಿಗೆಯಲ್ಲಿ ಬೆಂಗಳೂರಿನಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕೇಂದ್ರದಲ್ಲಿ ಕನಿಷ್ಠ ಎಂಟು ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ವರದಿ ಪಡೆದಿದ್ದಾರೆ. ಇದರಿಂದಾಗಿ ಬಹುಪ್ರಮುಖವಾದ ಕ್ರೀಡಾಪಟುಗಳ ತರಬೇತಿ ಕಾರ್ಯಕ್ರಮದ ಮೇಲೆ ಪರಿಣಾಮವಾಗಲಿದೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳೂ ಪಾಸಿಟಿವ್ ವರದಿ ಪಡೆದಿರುವುದು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‍ನಲ್ಲಿ ಗ್ರೀನ್ ಝೋನ್ ನಲ್ಲಿದ್ದ ಕ್ರೀಡಾಪಟುಗಳು ಸಹ ಸೋಂಕಿಗೆ ಒಳಗಾಗಿದ್ದಾರೆ. ಗ್ರೀನ್ ಝೋನ್ ಎನ್ನುವುದು ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗಳು ಕೊರೊನಾ ಮುನ್ನೆಚ್ಚರಿಕೆ ನಡುವೆ ತರಬೇತಿ ನೀಡುವ ಪ್ರದೇಶವಾಗಿದೆ. ಕೆಲವೇ ವಾರಗಳ ಹಿಂದೆ ಒಬ್ಬ ಉನ್ನತ ಅಧಿಕಾರಿ ಮತ್ತು ಇತರ ಇಬ್ಬರು ಇಲ್ಲಿ ಪಾಸಿಟಿವ್ ವರದಿ ಪಡೆದಿದ್ದರು. ಪಟಿಯಾಲ ಎನ್‍ಸಿಒಇ ಈಗಾಗಲೇ ಕೋವಿಡ್ ಪಾಸಿಟಿವ್ ಪ್ರಕರಣಗಳಿಂದ ತತ್ತರಿಸಿದೆ.

NEWS DESK

TIMES OF BENGALURU