ಬ್ಯಾನರ್ ನಿಂದ ಬಯಲಾಯ್ತು ಕೊಲೆ ರಹಸ್ಯ

ಬೆಂಗಳೂರು: ಮಾ. 25ರಂದು ತುರಹಳ್ಳಿ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ವನ ಸಂಪತ್ತು ಬೆಂಕಿಗೆ ಆಹುತಿಯಾಗಿತ್ತು. ಇದೇ ಜಾಗದಲ್ಲಿ ವ್ಯಕ್ತಿಯೊಬ್ಬನ ಶವ ಸಿಕ್ಕಿತ್ತು. ಮೇಲ್ನೋಟಕ್ಕೆ ಬೆಂಕಿ ಅವಘಡದಲ್ಲಿ ಸತ್ತಿರುವಂತೆ ಕಂಡರೂ ಅಲ್ಲಿ ಸಿಕ್ಕ ಬ್ಯಾನರ್‍ನಿಂದ ಬೆಚ್ಚಿಬೀಳಿಸೋ ಕೊಲೆ ರಹಸ್ಯ ಬಯಲಾಗಿದೆ.

ಮೃತದೇಹದ ಬಳಿ ಬನಶಂಕರಿ ಜನರಲ್ ಸ್ಟೋರ್ ಹೆಸರಿನ ಬ್ಯಾನರ್ ಬಿದ್ದಿತ್ತು. ಅದರ ಪ್ರಿಂಟಿಂಗ್ ಪ್ರೆಸ್ ವಿಳಾಸ ಪತ್ತೆ ಹಚ್ಚಿದ ಪೆÇಲೀಸರು, ಯಾವೆಲ್ಲ ಏರಿಯಾಗಳಿಗೆ ಬ್ಯಾನರ್ ಸರಬರಾಜು ಆಗಿದೆ ಅನ್ನೋದರ ಮಾಹಿತಿ ಕಲೆ ಹಾಕಿದಾಗ ಗೊತ್ತಾಯ್ತು ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಅಪರಿಚಿತ ಶವದ ಗುರುತು ಸಿಕ್ಕಿದೆ. ಮೃತನು ವಿಜಯನಗರದ ಹಗರಿಬೊಮ್ಮನಹಳ್ಳಿಯ ಅಮೀತ್. ಈತ ರಿಯಲ್ ಎಸ್ಟೇಟ್ ಎಜೆನ್ಸಿಯಲ್ಲಿ ಸೂಪರ್ ವೈಸರ್ ಆಗಿದ್ದ ಅಮೀತ್.

ಈತನ ಕೈಕೆಳಗೆ ಕೆಲಸ ಮಾಡುತ್ತಿದ್ದ ನಾಗರಾಜ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಅಮೀತ್ ಹತ್ಯೆಯ ಮಾಸ್ಟರ್ ಪ್ಲಾನ್ ರೂಪಿಸಿದ್ದ ನಾಗರಾಜ್, ಕೊಂದ ಬಳಿಕ ಅಮೀತ್‍ನ ಕೆಲಸ ಗಿಟ್ಟಿಸಿಕೊಳ್ಳಲು ಮತ್ತು ಆತನ ಕಾರನ್ನು ಮಾರಾಟ ಮಾಡಲು ಯೋಜನೆ ರೂಪಿಸಿದ್ದ. ಇದೀಗ ನಾಗರಾಜ್, ಮಂಜುನಾಥ್, ಅರುಣ್, ರಾಮ್ ಅಲಿಯಾಸ್ ಪರಶುರಾಮ ಹಾಗೂ ಓರ್ವ ಬಾಲಾಪರಾಧಿ ಸೇರಿ ಐವರನ್ನ ತಲಘಟ್ಟಪುರ ಪೊಲೀಸರು  ಬಂಧಿಸಿದ್ದಾರೆ.

NEWS DESK

TIMES OF BENGALURU