ನಾಳೆ ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದ್ದು,ನಾಳೆ ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ ಮಾಡುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, 6ನೇ ಆಯೋಗದ ಜಾರಿಗಾಗಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದೆ. ಆದ್ರೆ, ನಾಳೆ ಮೊಂಬತ್ತಿ ಬೆಳಗಿಸಿ ವಿಶೇಷ ಸತ್ಯಾಗ್ರಹ ಮಾಡಲಿದ್ದೇವೆ. ಸಂಜೆ 6ರಿಂದ 7 ಗಂಟೆಯವರೆಗೆ ಮೊಂಬತ್ತಿ ಬೆಳಗಿಸಿ ವಿಶೇಷ ಚಳುವಳಿ ಮಾಡುತ್ತೇವೆ.

NEWS DESK

TIMES OF BENGALURU