ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ

ಬೆಂಗಳೂರು: ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಏರುತ್ತಿದ್ದಂತೆ, ನಗರದಲ್ಲಿ ಸಾವುಗಳ ಸಂಖ್ಯೆಯೂ ಹೆಚ್ಚಾಗಿದೆ. ರಾಜಧಾನಿಯಲ್ಲಿಯೇ ದಿನಕ್ಕೆ 50ರಿಂದ 60 ಜನ ಮೃತಪಡುತ್ತಿದ್ದು, ವಿದ್ಯುತ್ ಚಿತಾಗಾರಗಳ ಮುಂದೆ ಶವಗಳ ವಾಹನ ಸಾಲುಗಟ್ಟಿ ನಿಂತಿವೆ. ನಗರದಲ್ಲಿ 12 ವಿದ್ಯುತ್ ಚಿತಾಗಾರಗಳ ಪೈಕಿ 5ರಲ್ಲಿ ಕೋವಿಡ್ ಶವಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ.

ಒಂದೊಂದು ದಿನ ಒಂದೊಂದು ಚಿತಾಗಾರದಲ್ಲಿ 20ಕ್ಕೂ ಹೆಚ್ಚು ಶವಗಳು ಬರುತ್ತವೆ. ಒಂದು ಶವ ಸಂಪೂರ್ಣವಾಗಿ ದಹನವಾಗಲು ಒಂದು ತಾಸು ಬೇಕಾಗುತ್ತದೆ. ಇನ್ನೂ ನಗರದ ಜಾಲಹಳ್ಳಿ ಬಳಿಯ ಲಕ್ಷ್ಮೀಪುರ ಕ್ರಾಸ್, ಸುಮನಹಳ್ಳಿ, ಕೆಂಗೇರಿ, ಬೊಮ್ಮನಹಳ್ಳಿ ಹಾಗೂ ಪೆನತ್ತೂರು ಚಿತಾಗಾರಗಳಲ್ಲಿ ಮಾತ್ರ ಕೋವಿಡ್ ಶವಸಂಸ್ಕಾರ ಮಾಡಲಾಗುತ್ತಿದೆ.

NEWS DESK

TIMES OF BENGALURU