ಕೆಎಸ್ ಆರ್ ಟಿಸಿ ಬಸ್‍ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು : ಕೆಎಸ್ ಆರ್ ಟಿಸಿಯ ಅಂಬಾರಿ ಡ್ರೀಮ್‍ಕ್ಲಾಸ್ ಬಸ್‍ಗೆ ಇಂದು ಬೆಳಗ್ಗೆ ಕಲ್ಲು ತೂರಾಟ ನಡೆದಿದ್ದು, ಬಸ್‍ನ ಹಿಂಬದಿ ಗಾಜು ಹೊಡೆದು ಹಾನಿಯುಂಟಾಗಿದೆ. ಕಳೆದ 9 ದಿನಗಳಿಂದ ಸಾರಿಗೆ ಸಂಸ್ಥೆಗಳ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.

ವಿರಳವಾಗಿ ಸಾರಿಗೆ ಸಂಸ್ಥೆಗಳ ಬಸ್ ಸಂಚರಿಸುತ್ತಿದ್ದು, ಕೆಲವೊಂದು ಬಸ್ ಗಳ ಮೇಲೆ ಕಲ್ಲು ತೂರಾಟದಂತಹ ಘಟನೆಗಳು ನಡೆಯುತ್ತಲೇ ಇವೆ. ಇಂದು ಬೆಳಗ್ಗೆ 6.45 ಗಂಟೆಗೆ ಯಲಹಂಕದ ಬಳಿ ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದುಕೆಎಸ್ ಆರ್ ಟಿಸಿ ಪ್ರಕಟಣೆ ತಿಳಿಸಿದೆ.

NEWS DESK

TIMES OF BENGALURU