ನಾಲ್ವರು ಡ್ರಗ್ ಪೆಡ್ಲರ್ಸ್‍ಗಳ ಬಂಧನ

ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ಕು ಜನ ಡ್ರಗ್ ಪೆಡ್ಲರ್ಸ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಜಾಹ್ ಫ್ರಾನ್ಸಿಸ್ ,ಚಾಲ್ರ್ಸ್ ಚೀಮಾ ಮಾಲಂಗ್ ಪಾಷಾ ,ಜಾಸಿರ್ ತಾನಿಚೇರಿ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಬಲೆ ಬೀಸಿದ ಸಿಸಿಬಿ ಪೊಲೀಸರು ಬಾಗಲೂರು ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 153 ಗ್ರಾಂ ಎಂಡಿಎಂಎ ಸೇರಿದಂತೆ 20 ಲಕ್ಷ ಮೌಲ್ಯದ ಮಾದಕವಸ್ತುಗಳು, ನಾಲ್ಕು ಸಾವಿರ ನಗದು ಜೊತೆ ಮಾರಾಕಾಸ್ತ್ರಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

NEWS DESK

TIMES OF BENGALURU