ಏ.20ರಂದು ಟಫ್ ರೂಲ್ಸ್ ಬಗ್ಗೆ ನಿರ್ಧಾರ

ಬೆಂಗಳೂರು: ಕೊರೊನಾ ಮಹಾಮಾರಿ ರಾಜಧಾನಿ ಬೆಂಗಳೂರಿನಲ್ಲಿ ಮಿತಿಮೀರುತ್ತಿರುವುದರಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಕೋವಿಡ್ ಸಲಹಾ ಸಮಿತಿ ತಜ್ಞರ ಜೊತೆ ತುರ್ತು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, 8 ಜಿಲ್ಲೆಗಳಲ್ಲಿ ಈಗಿರುವ ಕೊರೊನಾ ಕರ್ಫ್ಯೂ ಮುಂದುವರೆಯಲಿದೆ. ಉಳಿದ ಯಾವೆಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂಬ ಬಗ್ಗೆ ಏಪ್ರಿಲ್ 20ರಂದು ಮತ್ತೊಮ್ಮೆ ಕೋವಿಡ್ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಸಭೆ ಕರೆದು ನಿರ್ಧರಿಸಲಾಗುವುದು ಎಂದರು.

NEWS DESK

TIMES OF BENGALURU