ದುಪ್ಪಟ್ಟಾದ ಮೆಟ್ರೋ ಪ್ರಯಾಣಿಕರ ಸಂಖ್ಯೆ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಕಾರಣದಿಂದಾಗಿ ನಗರದೊಳಗೆ ಏಕೈಕ ಸಾರ್ವಜನಿಕ ಸಾರಿಗೆ ಎನಿಸಿರುವ ಮೆಟ್ರೊ ರೈಲಿನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಮಾರ್ಗಸೂಚಿಯಡಿ ಅನೇಕ ನಿಬರ್ಂಧಗಳ ಹೊರತಾಗಿಯೂ, ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಏ.9ರಂದು 1.89 ಲಕ್ಷ ಪ್ರಯಾಣಿಕರು ಮೆಟ್ರೊ ಬಳಸಿದ್ದಾರೆ. ಕೋವಿಡ್ ಬಿಕ್ಕಟ್ಟಿಗೂ ಮುನ್ನ, ನಿತ್ಯ ಸರಾಸರಿ 4.5 ಲಕ್ಷ ಜನ ಪ್ರಯಾಣಿಸುತ್ತಿದ್ದರು.

ಕಳೆದ ಸೆಪ್ಟೆಂಬರ್‍ನಲ್ಲಿ ಮೆಟ್ರೊ ಸೇವೆ ಪುನರಾರಂಭಗೊಂಡ ಸಂದರ್ಭದಲ್ಲಿ ಸರಾಸರಿ 31 ಸಾವಿರ ಜನ ಮೆಟ್ರೊ ಬಳಸುತ್ತಿದ್ದರು. ಈ ಸಂಖ್ಯೆ ದುಪ್ಪಟ್ಟಾಗಿದ್ದು, ತಿಂಗಳುಗಳ ನಂತರ ಅಂದರೆ ಜನವರಿಯಲ್ಲಿ. ಆ ತಿಂಗಳಲ್ಲಿ ಸರಾಸರಿ 65 ಸಾವಿರ ಜನ ಪ್ರಯಾಣಿಸುತ್ತಿದ್ದರು. ಮಾರ್ಚ್‍ನಲ್ಲಿ ಈ ಸಂಖ್ಯೆ 1.54 ಲಕ್ಷಕ್ಕೆ ಮುಟ್ಟಿದ್ದರೆ, ಈಗ ಎರಡು ಲಕ್ಷದ ಸಮೀಪ ಬಂದು ನಿಂತಿದೆ.

NEWS DESK

TIMES OF BENGALURU