ಎಸ್.ಎಸ್.ಎಲ್.ಸಿ ಎಕ್ಸಾಂ ನಡೆಯುತ್ತೆ

ಬೆಂಗಳೂರು: ಸಿ ಬಿ ಎಸ್ ಸಿ 10ನೇ ತರಗತಿ ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ  ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಈ ಬಗ್ಗೆ ಮಾತನಾಡಿ, ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯು ಪರೀಕ್ಷೆಗಳು ನಡೆಯಲಿವೆ.

ಈ ಬಗ್ಗೆ ಗೊಂದಲ ಬೇಡ. ಎಸ್.ಎಸ್.ಎಲ್.ಸಿ. ಪರೀಕ್ಷೆ ನಿಗದಿಯಾಗಿರುವುದು ಜೂನ್ 21ರಿಂದ ಕಳೆದ ವರ್ಷ ನೀಡಲಾಗಿದ್ದ ಎಸ್‍ಒಪಿಯನ್ನೇ ಅಳವಡಿಕಾ ಕ್ರಮವಾಗಿ ಅನುಸರಿಸಲಾಗುವುದು ಎಂದರು. ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಬೇಕು ಎಂಬುದು ಹಲವರ ಒತ್ತಾಯ. ಈ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ ಪತ್ರ ಬರೆದಿದ್ದಾರೆ. ಪರೀಕ್ಷಾ ದಿನಾಂಕಕ್ಕೆ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಹಾಗಾಗಿ ಆಗಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

NEWS DESK

TIMES OF BENGALURU