ಸೋಮವಾರದವರೆಗೂ ಸರ್ಕಾರಕ್ಕೆ ಡೆಡ್ ಲೈನ್

ಬೆಂಗಳೂರು: ಸಾರಿಗೆ ಕೆಲಸಗಾರರ ಬಗ್ಗೆ ಸರ್ಕಾರ ತಿರಸ್ಕಾರ ಭಾವನೆ ತೋರಿಸುತ್ತಿದೆ. ನೌಕರರ ಮನೆ ಮುಂದೆ ಹೋಗಿ ಅವರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತಿದೆ. ಇದರಿಂದ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ನಾವು ವಿಶ್ರಾಂತಿ ಪಡೆಯಲು ಕೊರೋನಾ ತೋರಿಸುತ್ತಿದ್ದೀರಾ. ಪ್ರಾಕೃತಿಕ ಸಮಸ್ಯೆ ಜಾಸ್ತಿ ಇರುತ್ತವೆ, ಅದನ್ನ ನಾವು ಎದುರಿಸಬೇಕು. ಸಮಸ್ಯೆ ಬಗ್ಗೆ ಮುಕ್ತ ಮಾತುಕತೆ ಮಾಡಿ ಬಗೆಹರಿಸಬೇಕು.

ಸರ್ಕಾರ ದೌರ್ಜನ್ಯದ ಮಾರ್ಗ ಅನುಸರಿಸುತ್ತಿದೆ. ಹಲವಾರು ನೌಕರರನ್ನು ಕಾರಣ ಕೊಡದೇ ಅರೆಸ್ಟ್ ಮಾಡಿ, ಭಯೋತ್ಪಾದಕರಾಗಿ ನೋಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ನೌಕರರ ಹನ್ನೊಂದನೆ ದಿನದ ಮುಷ್ಕರ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ. 1 ಲಕ್ಷಕ್ಕೂ ಹೆಚ್ಚು ಜನರು ಜೈಲಿಗೆ ಹೋಗಲು ಸಿದ್ದರಿದ್ದಾರೆ. ಸೋಮವಾರದವರೆಗೂ ಸರ್ಕಾರಕ್ಕೆ ಡೆಡ್ ಲೈನ್. ಆಗಲೂ ಸರ್ಕಾರ ಸ್ಪಂದಿಸದಿದ್ದರೆ ಸೋಮವಾರದ ನಂತರ ಜೈಲ್ ಬರೋ ಚಳುವಳಿ ಆರಂಭ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

NEWS DESK

TIMES OF BENGALURU