ಬೆಂಗಳೂರಿನ 11 ಜನರಿಗೆ ಯುಕೆ ರೂಪಾಂತರಿ ಕೊರೊನಾ

ಬೆಂಗಳೂರಿನ 11 ಜನರಿಗೆ ಯುಕೆ ರೂಪಾಂತರಿ ಕೊರೊನಾ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ನಗರದಲ್ಲಿ 11 ಜನರಲ್ಲಿ ಯುಕೆ ರೂಪಾಂತರಿ ವೈರಸ್ ಪತ್ತೆಯಾಗಿದೆ. ನಗರದಲ್ಲಿ ಒಟ್ಟು 11 ಜನರಲ್ಲಿ ಯುಕೆ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನ ಆರ್.ಆರ್. ನಗರದ ಮೂವರು ವಿದೇಶ ಪ್ರವಾಸಕ್ಕೆ ಹೋಗಿದ್ದರು.

ಇನ್ನುಳಿದ 8 ಜನರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಯುಕೆ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ದಾಸರಹಳ್ಳಿಯ ಮೂವರು, ದಾಸರಹಳ್ಳಿಯ ಹೌಸ್ ಕಾಲೋನಿಯಲ್ಲಿ ನಾಲ್ವರು ಹಾಗೂ ಸಿಂಗಸಂದ್ರದಲ್ಲಿ ಒಬ್ಬರಿಗೆ ಯುಕೆ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.

NEWS DESK

TIMES OF BENGALURU